ಇಸಬೆಲ (ಇಂಗ್ಲೆಂಡಿನ)
 1292-1358. ಫ್ರಾನ್ಸಿನ ನಾಲ್ಕನೆಯ ಫಿಲಿಪನ ಮಗಳು. ಇಂಗ್ಲೆಂಡಿನ ಎರಡನೆಯ ಎಡ್ವರ್ಡನನ್ನು ಮದುವೆಯಾಗಿ ರಾಣಿ ಎನಿಸಿದಳು. ಗಂಡನ ಅನಾದರಕ್ಕೆ ಪಾತ್ರಳಾದ ಈಕೆ ರಾಜವಂಶದ ಬೆಂಬಲಿಗರನ್ನು ದ್ವೇಷಿಸಿದಳು. 1325ರಲ್ಲಿ ಫ್ರಾನ್ಸಿಗೆ ಬಂದಳು. ಅಲ್ಲಿ ರೋಜರ್ ಮಾರ್ಟಿಮರ್‍ನೊಂದಿಗೆ ಸೇರಿ ಸೈನ್ಯವನ್ನು ಕಟ್ಟಿ ಇಂಗ್ಲೆಂಡನ್ನು ವಶಪಡಿಸಿಕೊಂಡಳು. ಎಡ್ವರ್ಡ್ ರಾಜ್ಯಭ್ರಷ್ಟನಾಗಿ ಕೊಲೆಯಾದ. 1330ರಲ್ಲಿ ಮೂರನೆಯ ಎಡ್ವರ್ಡ್ ಅಧಿಕಾರ ಕಿತ್ತುಕೊಳ್ಳುವವರೆಗೂ ಇಸಬೆಲ ಮತ್ತು ಮಾರ್ಟಿಮರ್ ಇಂಗ್ಲೆಂಡನ್ನು ಆಳಿದರು.											

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ